logo

ಸಿಎಸ್ಐಆರ್ - ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ, ಭಾರತ ಸರ್ಕಾರ,
ಮೈಸೂರು - 570020

ಕುರಿತು

ಉತ್ಪನ್ನಗಳು ಮತ್ತು ಸೇವೆಗಳ ವಿಷಯದಲ್ಲಿ ಭಾರತವನ್ನು ಸ್ವಾವಲಂಬಿ ರಾಷ್ಟ್ರವನ್ನಾಗಿ ಮಾಡಲು ಭಾರತದ ಸರ್ಕಾರ ಪ್ರಾರಂಭಿಸಿದ ಪ್ರಮುಖ ಉಪಕ್ರಮಗಳಲ್ಲಿ ಅತ್ಮ ನಿರ್ಭಾರ ಭಾರತ ಒಂದಾಗಿದೆ. ಈ ನಿಟ್ಟಿನಲ್ಲಿ, ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವಾಲಯವು ಸುಮಾರು 25 ಲಕ್ಷ ಉದ್ಯಮಗಳನ್ನು ತಲುಪಲು ಅನೌಪಚಾರಿಕ ವಲಯದಲ್ಲಿ ಗ್ರಾಮೀಣ ಸೂಕ್ಷ್ಮ ಉದ್ಯಮಗಳನ್ನು ಉತ್ತೇಜಿಸುವ ಯೋಜನೆಯನ್ನು ಘೋಷಿಸಿದೆ. ಆದಾಗ್ಯೂ, ಆಧುನಿಕ ತಂತ್ರಜ್ಞಾನಗಳ ಸೀಮಿತ ಬಳಕೆ ಮತ್ತು ಕೌಶಲ್ಯ‌ಗಳು, ಗುಣಮಟ್ಟದ ಅಂಶಗಳು, ಬ್ರ್ಯಾಂಡಿಂಗ್ ನಲ್ಲಿ ಕೊರತೆ ಮತ್ತು ಪೂರೈಕೆ ಸರಪಳಿಗಳೊಂದಿಗೆ ಸಂಯೋಜಿಸಲು ಅಸಮರ್ಥತೆ ಮುಂತಾದ ಹಲವಾರು ಅಂಶಗಳಿಂದಾಗಿ ಇದು ಪ್ರಮುಖ ಅಡೆತಡೆಗಳನ್ನು ಎದುರಿಸುತ್ತಿದೆ. ಈ ನಿರ್ಬಂಧಗಳನ್ನು ನಿವಾರಿಸಲು ಕೌಶಲ್ಯ, ತಂತ್ರಜ್ಞಾನ, ಸಾಲ ಮತ್ತು ಮಾರುಕಟ್ಟೆ ಇವುಗಳನ್ನು ಬೆಂಬಲಿಸುವುದು ಮತ್ತು ಮೌಲ್ಯ ಸರಪಳಿಯಲ್ಲಿ ಭಾಗವಹಿಸುವುದು ಅತ್ಯಗತ್ಯ. ಆಹಾರ ಸಂಸ್ಕರಣೆಯಲ್ಲಿ ತೊಡಗಿಸಿಕೊಳ್ಳಲು ಬಯಸುವ ರಾಜ್ಯದ ಸ್ವಸಹಾಯ ಸಂಘಗಳು, ಎಫ್‌ಪಿಒ(FPO)ಗಳಿಗೆ ಈ ಯೋಜನೆಯು ಪ್ರಯೋಜನಕಾರಿಯಾಗಲಿದೆ.

ಈ ಯೋಜನೆಯ ಪ್ರಮುಖ ಲಕ್ಷಣಗಳು ಹೀಗಿವೆ

  • ಅಸ್ತಿತ್ವದಲ್ಲಿರುವ ಸೂಕ್ಷ್ಮ ಆಹಾರ ಉದ್ಯಮಗಳು, ಎಫ್‌ಪಿಒ(FPO)ಗಳು, ಸ್ವಸಹಾಯ ಸಂಘಗಳು ಮತ್ತು ನಿಗಮಗಳಿಂದ ಸಾಲವನ್ನು ಪಡೆಯಲು ಹೆಚ್ಚಿನ ಅವಕಾಶ.
  • ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್ ಅನ್ನು ಬಲಪಡಿಸುವ ಮೂಲಕ ಅಸ್ತಿತ್ವದಲ್ಲಿರುವ ಪೂರೈಕೆ ಸರಪಳಿಯೊಂದಿಗೆ ಸಂಯೋಜನೆ
  • ಅಸ್ತಿತ್ವದಲ್ಲಿರುವ 2 ಲಕ್ಷ ಉದ್ಯಮಗಳನ್ನು ಔಪಚಾರಿಕ ವಲಯಕ್ಕೆ ಪರಿವರ್ತಿಸಲು ಬೆಂಬಲ
  • ಸಾಮಾನ್ಯ ಸಂಸ್ಕರಣಾ ಸೌಲಭ್ಯ, ಪ್ರಯೋಗಾಲಯಗಳು, ಸಂಗ್ರಹಣೆ, ಪ್ಯಾಕೇಜಿಂಗ್, ಮಾರ್ಕೆಟಿಂಗ್ ಮತ್ತು ಇನ್ಕ್ಯುಬೇಷನ್(Incubation) ಸೇವೆಗಳಂತಹ ಸಾಮಾನ್ಯ ಸೇವೆಗಳಿಗೆ ಪ್ರವೇಶ
  • ಸಂಸ್ಥೆಗಳು, ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ತರಬೇತಿಗಳ ಬಲವರ್ಧನೆ
  • ವೃತ್ತಿಪರ ಮತ್ತು ಬೆಂಬಲಕ್ಕೆ ಹೆಚ್ಚಿನ ಆದ್ಯತೆ

ಈ ಯೋಜನೆಯು ಇನ್ಪುಟ್(input) ನ ಸಂಗ್ರಹಣೆ, ಸಾಮಾನ್ಯ ಸೇವೆಗಳನ್ನು ಪಡೆಯುವುದು ಮತ್ತು ಉತ್ಪನ್ನಗಳ ಮಾರಾಟದ ವಿಷಯದಲ್ಲಿ ಹೆಚ್ಚಿನ ಪ್ರಮಾಣದ ಲಾಭಗಳನ್ನು ಪಡೆಯಲು ಒಂದು ಜಿಲ್ಲಾ ಒಂದು ಉತ್ಪನ್ನ ವಿಧಾನವನ್ನು (ಒಡಿಒಪಿ) ಅಳವಡಿಸಿಕೊಳ್ಳಲಿದೆ. ಕ್ಲಸ್ಟರ್(cluster) ಅಭಿವೃದ್ಧಿ ಸೇರಿದಂತೆ ಮೌಲ್ಯ ಸರಪಳಿ ಮೂಲಸೌಕರ್ಯವನ್ನು ಬಳಸಿಕೊಳ್ಳಲು ಈ ಯೋಜನೆಯು ಒಡಿಒಪಿ(ODOP)ಗೆ ಸಹಾಯ ಮಾಡುತ್ತದೆ. ಒಡಿಒಪಿ(ODOP) ಉತ್ಪನ್ನವು ಹಾಳಾಗಬಹುದಾದ ಕೃಷಿ ಉತ್ಪನ್ನಗಳು, ಏಕದಳ ಆಧಾರಿತ ಉತ್ಪನ್ನಗಳು, ಮಾವು, ರಾಗಿ, ಜೋಳ, ಮೀನುಗಾರಿಕೆ, ಅರಿಶಿನ, ಜೇನುತುಪ್ಪದಂತಹ ಜಿಲ್ಲೆಯಲ್ಲಿ ವ್ಯಾಪಕವಾಗಿ ಉತ್ಪತ್ತಿಯಾಗುವ ಆಹಾರ ಉತ್ಪನ್ನವಾಗಿರಬಹುದು. ಇದಲ್ಲದೆ, ಈ ಯೋಜನೆಯು ಇತರ ಉತ್ಪನ್ನಗಳನ್ನು ಸಂಸ್ಕರಿಸುವ, ಅಸ್ತಿತ್ವದಲ್ಲಿರುವ ಘಟಕಗಳನ್ನು ಬೆಂಬಲಿಸುತ್ತದೆ. ಆದಾಗ್ಯೂ, ಹೊಸ ಘಟಕಗಳಿಗೆ ಇದು ಒಡಿಒಪಿ(ODOP)ಗೆ ಮಾತ್ರ ಸೀಮಿತವಾಗಿರುತ್ತದೆ. ವೈಯಕ್ತಿಕ ಸೂಕ್ಷ್ಮ ಉದ್ಯಮಿಗಳಿಗೆ, ಯೋಜನೆಯ ವೆಚ್ಚದ ಶೇಕಡಾ 35% ರಷ್ಟು ಸೇರಿದಂತೆ ಗರಿಷ್ಠ ಪ್ರತಿ ಯೂನಿಟ್‌ಗೆ 10.00 ಲಕ್ಷ ರೂಪಾಯಿ ಸಾಲ ಆಧಾರಿತ ಬಂಡವಾಳ ಸಹಾಯಧನವನ್ನು ಕೊಡಲಾಗುತ್ತದೆ..

ಈ ನಿಟ್ಟಿನಲ್ಲಿ, ಸಿಎಸ್ಐಆರ್- ಸಿಎಫ್‌ಟಿಆರ್‌ಐ(CSIR-CFTRI) ಅನ್ನು ಕರ್ನಾಟಕದಲ್ಲಿ ಯೋಜನೆಯ ಅನುಷ್ಠಾನಕ್ಕಾಗಿ ರಾಜ್ಯ ಮಟ್ಟದ ತಾಂತ್ರಿಕ ಸಂಸ್ಥೆ ಎಂದು ಗುರುತಿಸಲಾಗಿದೆ.